ಮ್ವಾಸಾನ್, ಫರ್ಡಿನೆಂಡ್ ಫ್ರೀಡೆರಿಕ್ ಹೆನ್ರಿ
 	1852 - 1907. ಫ್ರಾನ್ಸಿನ ರಸಾಯನ ವಿe್ಞÁನಿ. ನೊಬೆಲ್ ಪಾರಿತೋಷಿಕ ವಿಜೇತ, ಜನನ ಪ್ಯಾರಿಸ್ಸಿನಲ್ಲಿ (28 ಸೆಪ್ಟೆಂಬರ್ 1852). ಬಡತನದ ಕಾರಣ ಈತ ಹೆಚ್ಚಿನ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ಹದಿನೆಂಟನೆಯ ವಯಸ್ಸಿನಲ್ಲಿ ಗಂದಿಗೆ ಅಂಗಡಿಯವನ ಬಳಿ ಕೆಲಸಕ್ಕೆ ಸೇರಿಕೊಂಡ. ರಸಾಯನವಿe್ಞÁನದದಲ್ಲಿ ಈತನಿಗೆ ಇದ್ದ ಅಮಿತಾಸಕ್ತಿಯ ಸಲುವಾಗಿ ಎರಡು ವರ್ಷಗಳ ಬಳಿಕ ಆ ಕೆಲಸವನ್ನು ತೊರೆದ. ಕಷ್ಟಪಟ್ಟು ದುಡಿದು ತನಗೆ ಅತ್ಯಗತ್ಯವಾಗಿದ್ದ ಶಿಕ್ಷಣವನ್ನು ದೊರಕಿಸಿಕೊಂಡ. ಇವನನ್ನು ವೃತ್ತಿನಿರತ ಔಷಧಗಾರನೆಂದು ಪರಿಗಣಿಸಲಾಯಿತು (1870). ತಾನು ಮೆಚ್ಚಿದ ಹುಡುಗಿಯೊಬ್ಬಳನ್ನು ವಿವಾಹವಾದ (1882). ಇವನ ಅದೃಷ್ಟಕ್ಕೆ ಮಾವ ದಯಾಮಯಿಯೂ ಇವನಂತೆಯೇ ಔಷಧಗಾರನೂ ಆಗಿದ್ದರಿಂದ ಈತನಿಗೆ ಬಹಳಷ್ಟು ಸಹಾಯ ಸಹಕಾರಗಳು ಲಭಿಸುವಂತಾದುವು. ಅಲ್ಲದೆ ರಸಾಯನವಿe್ಞÁನ ಅಧ್ಯಯನದ ಬಗ್ಗೆ ಹೆಚ್ಚು ವೇಳೆಯನ್ನು ವಿನಿಯೋಗಿಸುವುದು ಸಾಧ್ಯವಾಯಿತು ಕೂಡ.

ಮ್ವಾಸಾನನ ಗುರುವೊಬ್ಬ ಫ್ಲೂರಿನ್ ಧಾತುವನ್ನು ಬೇರ್ಪಡಿಸುವುದರಲ್ಲಿ ನಿರತಾಗಿದ್ದ (1870 ದಶಕಗಳಲ್ಲಿ) ಇಂಗ್ಲಿಷ್ ರಸಾಯನವಿe್ಞÁನಿ ಹಂಫ್ರಿ ಡೇವಿ (1778 - 1829) ಎಂಬವನ ಕಾಲದಿಂದಲೂ ರಸಾಯನವಿe್ಞÁನಿಗಳಿಗೆ ಈ ಧಾತುವಿನ ಇರವು ಮನವರಿಕೆಯಾಗಿತ್ತು. ಇದು ಕ್ಲೋರಿನ್ ಅನಿಲದಂತೆಯೇ ಗುಣಧರ್ಮಗಳನ್ನು ಹೊಂದಿರಬೇಕೆಂದೂ ಕ್ಲೋರಿನ್ನಿಗಿಂತಲೂ ಅಧಿಕವಾಗಿ ಕ್ರಿಯಾಶಾಲಿಯಾಗಿರಬೇಕೆಂದೂ ಭಾವಿಸಿದ್ದರು. ಬಹಳಷ್ಟು ರಸಾಯನವಿe್ಞÁನಿಗಳು ಫ್ಲೂರಿನ್ನನ್ನು ಬೇರ್ಪಡಿಸಲು ಪ್ರಯತ್ನಿಸಿದ್ದರು.  ಡೇವಿ ಸಹ ಪ್ರಯತ್ನಿಸಿದ್ದ. ಅಂತೆಯೇ ಗೇ-ಲ್ಯೂಸಾಕ್ ಮತ್ತು ತೇನಾರ್ಡರು, ಯಾರೂ ಇದರಲ್ಲಿ ಸಫಲರಾಗಲಿಲ್ಲ. ಕೆಲವರು ಫ್ಲೂರಿನ್ನಿನ ಹಾಗೂ ಅದರ ಧಾತುಗಳ ವಿಷಬಾಧೆಯಿಂದ ನರಳಿದ್ದರು. ಒಂದು ವೇಳೆ ಅದರ ಇನ್ನಿತರ ಧಾತುಗಳಿಂದ ಫ್ಲೂರಿನ್ನನ್ನು ಬೇರ್ಪಡಿಸುವುದು ಸಾಧ್ಯವಾದರೂ ಅದು ಮತ್ತಾವುದೇ ಧಾತುವಿನೊಂದಿಗೆ ಸುಲಭವಾಗಿ ಸೇರ್ಪಡೆಗೊಳ್ಳುವುದೇ ಅಲ್ಲಿದ್ದ ಪ್ರಮುಖ ಸಮಸ್ಯೆಯಾಗಿತ್ತು.

ಈ ಅಪಾಯಕಾರಿ ಕೆಲಸವನ್ನು ಎತ್ತಿಕೊಳ್ಳಲು ಮ್ವಾಸಾನ್ ನಿರ್ಧರಿಸಿದ. ತನ್ನ ಸಲಕರಣೆಗಳಿಗೆ ಫ್ಲೂರಿನ್ನಿನ ಬಾಧೆಯಿಂದ ರಕ್ಷಣೆ ನೀಡುವಂಥ ವಸ್ತುಗಳ ಪೈಕಿ ಒಂದಾದ ಪ್ಲಾಟಿನಮ್ಮನ್ನು ಬಳಸಿದ. ಈ ಕ್ರಿಯಾತಂತ್ರದ ಬೇರೆ ಬೇರೆ ವಿಧಾನಗಳನ್ನೂ ಅನ್ವಯಿಸಿಕೊಂಡ. ಪ್ಲಾಟಿನಮ್ಮಿನಿಂದಲೇ ತಯಾರಿಸಿದ ಉಪಕರಣವೊಂದರಲ್ಲಿ, ಹೈಡ್ರೋಕ್ಲೋರಿಕ್ ಆಮ್ಲ ಹಾಗೂ ಪೊಟ್ಯಾಸಿಯಮ್ ಫ್ಲೂರೈಡುಗಳು ಇರುವ ದ್ರಾವಣದ ಮೂಲಕ ವಿದ್ಯುತ್ಪ್ರವಾಹ ಹರಿಸಿದ (26 ಜೂನ್ 1886). ದ್ರಾವಣದ ಉಷ್ಣತೆಯನ್ನು - 500ಅ ಗೆ ಇಳಿಸಿದ. ಇದರಿಂದ ಫ್ಲೂರಿನ್ನಿನ ಕ್ರಿಯಾಸಾಮಥ್ರ್ಯ ಕಡಿಮೆಯಾಗಲು ಅವಕಾಶವಾಯಿತು. ಪ್ಲಾಟಿನಮ್ಮಿನ ಪರಿಸರದಲ್ಲಿ ಫ್ಲೂರಿನ್ ಅನಿಲವನ್ನು ಬೇರ್ಪಡಿಸಿದ. ನಸುಹಳದಿ ಬಣ್ಣ ಫ್ಲೂರಿನ್ ಅನಿಲ ಪ್ಲಾಟಿನಮ್ ಒಂದನ್ನು ಬಿಟ್ಟು ತನ್ನ ಆಸುಪಾಸಿನಲ್ಲಿರಬಹುದಾದ ಎಲ್ಲದರ ಮೇಲೂ ಉಗ್ರಪ್ರಭಾವ ಬೀರಿತ್ತು. ಎಲ್ಲಧಾತುಗಳ ಪೈಕಿ ಫ್ಲೂರಿನ್ ಅನಿಲವೇ ಅತ್ಯಂತ ಕ್ರಿಯಾಶಾಲಿಯದಾಗಿತ್ತು. 

ಫ್ಲೂರಿನ್ನಿನ ಆವಿಷ್ಕಾರ ಆದ ಸ್ವಲ್ಪ ಕಾಲದ ಬಳಿಕ ಮ್ವಾಸಾನನನ್ನು ಕೂಲ್ ಆಫ್ ಫಾರ್ಮೆಸಿಯಲ್ಲಿ ಔಷಧಗಾರಿಕೆ ಪ್ರಾಧ್ಯಾಪಕನಾಗಿ ನೇಮಿಸಲಾಯಿತು. ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಈತನಿಗೆ ಪ್ರಾಧ್ಯಾಪಕನ ಹುದ್ದೆ ದೊರೆಯಿತು (1900). ಫ್ಲೂರಿನ್ನನ್ನು ಬೇರ್ಪಡಿಸಿದ್ದರ ಗೌರವಾರ್ಥ ಇವನಿಗೆ ನೊಬೆಲ್ ಪಾರಿತೋಷಿಕವೂ ಪ್ರಾಪ್ತಿಯಾಯಿತು (1906).

ಮ್ವಾಸನನಿಗೆ ಕಾರ್ಬನನ್ನು ವಜ್ರಕ್ಕಿಂತಲೂ ಅತ್ಯಂತ ಸುಂದರ ಹಾಗೂ ಮೌಲ್ವಿತ ರೂಪದಲ್ಲಿ ತಯಾರಿಸಬೇಕೆಂದೂ ಆಸೆಯಿತ್ತು. ಮೊದಮೊದಲಿಗೆ ಕಾರ್ಬನ್ ಸಂಯುಕ್ತಗಳಿಂದ ವಜ್ರಗಳನ್ನು ಪಡೆಯಲು ಪ್ರಯತ್ನಿಸಿದನಾದರೂ ಸಫಲನಾಗಲಿಲ್ಲ. ಅಧಿಕ ಒತ್ತಡಗಳನ್ನು ಬಳಸಿ ಇದ್ದಿಲನ್ನು ವಜ್ರವನ್ನಾಗಿ ಮಾರ್ಪಡಿಸಲು ದೀರ್ಘಾವಧಿಯ ಪ್ರಯತ್ನವನ್ನೂ ನಡೆಸಿದ್ದ. ಆದರೆ ಅಗತ್ಯವಿಧದ ಉಷ್ಣತೆಯಾಗಲಿ ಒತ್ತಡವಾಗಲಿ ಆಗಿನ ಕಾಲಕ್ಕೆ ಲಭ್ಯವಿರದಿದ್ದ ಕಾರಣ ಮ್ವಾಸಾನ್ ತನ್ನ ಪ್ರಯತ್ನದಲ್ಲಿ ಯಶಸ್ಸು ಕಾಣಲಿಲ್ಲ. ಅಧಿಕ ಒತ್ತಡಗಳನ್ನು ಉಂಟುಮಾಡುವಲ್ಲಿ ಅಮೆರಿಕದ ಭೌತವಿಜ್ಞಾನಿ ಪರ್ಸಿ ವಿಲಿಯಮ್ಸ್ ಬ್ರಿಜ್‍ಮನ್ (1882 - 1961) ಎಂಬವ ಯಶಸ್ವಿಯಾದ. 1893ರಲ್ಲಿ ಮ್ವಾಸಾನನ ಪ್ರಯತ್ನಗಳಿಗೆ ಕೊಂಚಮಟ್ಟಿಗೆ ಯಶಸ್ಸು ದೊರೆಯಿತು. ಈತ ಪಡೆದ ಕಲ್ಮಷಯುಕ್ತ, ಚಿಕ್ಕ ಚಿಕ್ಕಗಾತ್ರದ, ಹೊಳೆಯುವ ವಜ್ರದ ಹರಳುಗಳನ್ನು ಪ್ರದರ್ಶನಕ್ಕೆ ಇಡಲಾಯಿತು. ಮ್ವಾಸಾನ್ ಪ್ಯಾರಿಸಿನಲ್ಲಿ ನಿಧನನಾದ (20 ಫೆಬ್ರುವರಿ 1907). 							
(ಕೆ.ಸಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ